polihudga (polihudga) wrote,
polihudga
polihudga

 • Mood:

ಯಾರು ಈ ವರ್ಷದ ಕನ್ನಡಿಗ ??

ಪ್ರತಿ ವರ್ಷದ ಕೊನೆಯಲ್ಲಿ ಈ ಪ್ರಶ್ನೆ ಬರುತ್ತದೆ, ಯಾರು, ಯಾಕೆ ಅವರೇ ??, ಏನು ಆಯ್ಕೆಯ ಮಾನದಂಡ ಅಂತ. ನಮ್ಮ ಮುಂದೆ ೫-೬ ಹೆಸರುಗಳು ಹಾಸು ಹೊಗುತ್ತವೆ, ಆದರೆ ಪ್ರತಿ ವರ್ಷವು ಆದೇ ಹೆಸರುಗಳು ಕಂಡು ಬರುವುದು ನಿಜಕ್ಕೂ ದೌಭಾಗ್ಯವೇ ಸರಿ. ಕನ್ನಡಕ್ಕೆ ಎಂದು ಧ್ವನಿ ಎತ್ತದ ಸಿನಿಮಾ ನಟರು , ಕನ್ನಡದ ಗಂಧವೇ ಗೊತ್ತಿಲ್ಲದ ಕ್ರೀಡಾಪಟುಗಳು ಇಲ್ಲಾ ಕನ್ನಡಿಗರನ್ನೆ ತುಳಿಯುವ ಉದ್ಯಮಿಗಳು, ಕನ್ನಡ ಹೋರಾಟಗಾರರನ್ನು ಕಾಲೆಳೆಯುವ ನಮ್ಮ ಬುದ್ಧಿ-ಜೀವಿ ಸಾಹಿತಿಗಳು. ಇವರುಗಳಲ್ಲಿ ಆಯ್ಕೆ ಮಾಡಬೇಕು ಎಂದು ಮುಂದೆ ಇಟ್ಟಾಗ ನಿಜಕ್ಕೂ ಕನ್ನಡಿಗನ ಮನಸ್ಸು ನೊಯುತ್ತದೆ. ಇದರ ಮಧ್ಯೆ ಕನ್ನಡಪ್ರಭದ ವರ್ಷದ ಕನ್ನಡಿಗ ಆಯ್ಕೆ ನಿಜಕ್ಕೂ ಅಭಿನಂದನಾರ್ಹ. ಇವರು ಯಾರು ಹೆಸರು ಮಾಡಿಲ್ಲ, ವೀರಾವೇಶಗಳಿಂದ ಕ್ಯಾಮೆರಾ ಮುಂದೆ ಮಾತಾಡಿಲ್ಲ. ತಮ್ಮ ಚೌಕಟ್ಟಿನಲ್ಲಿ ಮತ್ತು ಸೀಮಿತ ಪರಿಧಿಯಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿ ಆಗಿದ್ದಾರೆ. ಇವರುಗಳ ಸಂಖ್ಯೆ ಇನ್ನೂ ಹೆಚ್ಚು ಆಗಲಿ ಎಂದು ಆಶಿಸೊಣ.

ನಿಮ್ಮ
-ಪ
Subscribe

 • ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು

  ಮಾನವ ವಿಕಸನ ಹೊಂದಿದ ಹಾಗೆ ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು. ಆ ಸಮಯಕ್ಕೆ ತಕ್ಕ ಹಾಗೆ ಅದನ್ನು…

 • ಗೋತ್ರ ನೋಡುವುದು ಸರಿಯೇ??

  ಹುಡುಗ/ಹುಡುಗಿ ಮದುವೆಯ ವಯಸ್ಸಿಗೆ ಬಂದರೆ ಇಲ್ಲಾ ಮನೆಯಲ್ಲಿ ವದು-ವರ ಬೇಟೆ ಶುರುವಾದರೆ ಸಾಕು, ದೂಳು ಹಿಡಿದಿರುವ ಜಾತಕ ಅಟ್ಟದಿಂದ ಆಚೆ ಬರುತ್ತದೆ, ಎತ್ತದ,ಓದು, ಕೆಲಸ,ಗೊತ್ರ ಮತ್ತು…

 • kannadigana kelavu bramegaLu

  ನಮ್ಮ ಕನ್ನಡಿಗರು ಬೇರೆಯವರು ಹೇಳಿದನ್ನು ಕುರುಡಾಗಿ ನಂಬುತ್ತಾರೆ. ಇದು ನಮ್ಮ ಕೀಳೆರಿಮೆಯ ಪ್ರಭಾವವೊ ಇಲ್ಲ ಕನ್ನದ ಭಾಷೆ-ಚರಿತ್ರೆ ಬಗ್ಗೆ ಇರುವ ಅಜ್ಞಾನವೊ ಕಾಣೆ. ಇಂತ ಕೆಲವು…

 • Post a new comment

  Error

  default userpic
  When you submit the form an invisible reCAPTCHA check will be performed.
  You must follow the Privacy Policy and Google Terms of use.
 • 3 comments